ಮುಖ್ಯ ಯೋಜನಾಧಿಕಾರಿಯವರು ನಗರ ಬಡತನಾ ನಿರ್ಮೂಲನಾ ಕೋಶದ ಮುಖ್ಯಸ್ಥರಾಗಿರುತ್ತಾರೆ.

• ಮುಖ್ಯ ಯೋಜನಾಧಿಕಾರಿಯವರು ಇಂದಿರಾ ಕ್ಯಾಂಟೀನ್ ಯೋಜನೆಯ ಅನುಷ್ಠಾನ, ಎಸ್.ಎಫ್.ಸಿ ಮುಕ್ತನಿಧಿ, ಎಸ್.ಎಫ್.ಸಿ ವಿಶೇಷ ಅನುದಾನ, ೆಸ್.ಎಫ್.ಸಿ ಕುಡಿಯುವ ನೀರು ಅನುದಾನ, ರಸ್ತೆ ಮತ್ತು ಉದ್ಯಾನವನ, ಎಸ್.ಎಫ್.ಸಿ ಪ್ರೋತ್ಸಾಹಧನ ಅನುದಾನದಿತ ಅಭಿವೃದ್ಧಿ ಕಾಮಗಾರಿಗಳ ಅನುಷ್ಠಾನ ಹಾಗೂ ಪರಿಶೀಲನೆ.

• ರಾಜ್ಯದ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಕಲ್ಯಾಣ ಕಾರ್ಯಕ್ರಮಗಳಾದ 24.10% (ಎಸ್.ಸಿ/ಎಸ್.ಟಿ), 7.25% (ನಗರ ಬಡಜನರ) ಮತ್ತು 5% (ವಿಕಲಚೇತನರ) ಗಳ ಅನುಷ್ಠಾನ ಮತ್ತು ಪರಿಶೀಲನೆ.

• ಪೌರಕಾರ್ಮಿಕರ ಗೃಹಭಾಗ್ಯ ಯೋಜನೆಯ ಅನುಷ್ಠಾನ ಮತ್ತು ಪರಿಶೀಲನೆ.

• ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಅಂಗನವಾಡಿ ಕೇಂದ್ರಗಳ ಅನುಷ್ಠಾನ ಮತ್ತು ಪರಿಶೀಲನೆ.

• ಸಕಾಲ ಕಾಯರ್ಕ್ರಮದ ಅನುಷ್ಠಾನ ಮತ್ತು ಪರಿಶೀಲನೆ.

• ನಿರ್ದೇಶಕರು ವಹಿಸುವ ಕೆಲಸಗಳನ್ನು ಕಾಲಕಾಲಕ್ಕೆ ಕ್ರಮವಹಿಸುವುದು.

ಮೂಲ : ಪೌರಾಡಳಿತ ನಿರ್ದೇಶನಾಲಯ , ಕರ್ನಾಟಕ ಸರ್ಕಾರ.