ಕರ್ನಾಟಕ ರಾಜ್ಯದ ಎಲ್ಲಾ ಸ್ಥಳೀಯ ಸಂಸ್ಥೆಗಳ ಆಡಳಿತ, ಅಭಿವೃದ್ಧಿ ಹಾಗು ಹಣಕಾಸು ವ್ಯವಹಾರಗಳನ್ನು ನಿಯಂತ್ರಿಸಲು ಪೌರಾಡಳಿತ ನಿರ್ದೇಶನಾಲಯವನ್ನು 1984ರಲ್ಲಿ ಸೃಜಿಸಲಾಯಿತು. ಸ್ಥಳೀಯ ಸಂಸ್ಥೆಗಳಿಗೆ ಸಂಬAಧಿಸಿದ ಮಾಹಿತಿಯನ್ನು ಕಲೆಹಾಕಿ ಸರ್ಕಾರಕ್ಕೆ ಸಲ್ಲಿಸುವುದು ಹಾಗು ಪೌರಾಡಳಿತಕ್ಕೆ ಸಂಬಂದಿಸಿದAತೆ ಕಾರ್ಯನೀತಿಯನ್ನು ರೂಪಿಸುವುದು ನಿರ್ದೇಶನಾಲಯದ ಪ್ರಮುಖ ಕರ್ತವ್ಯಗಳಾಗಿರುತ್ತವೆ. 

ಕರ್ನಾಟಕ ಪುರಸಭೆಗಳ ಅಧಿನಿಯಮ 1964 ರಲ್ಲಿ ಪ್ರದತ್ತವಾದ ಅಧಿಕಾರದನ್ವಯ 10 ಮಹಾನಗರಪಾಲಿಕೆಗಳು, 59 ನಗರಸಭೆಗಳು, 116 ಪುರಸಭೆಗಳು, 97 ಪಟ್ಟಣ ಪಂಚಾಯಿತಿಗಳು ಹಾಗೂ 04 ಅಧಿಸೂಚಿತ ಪ್ರದೇಶ ಸಮಿತಿಗಳು ಪೌರಾಡಳಿತ ನಿರ್ದೇಶನಾಲಯದ ವ್ಯಾಪ್ತಿಗೆ ಒಳಪಡುತ್ತವೆ. ಈ ಎಲ್ಲಾ ಸ್ಥಳೀಯ ಸಂಸ್ಥೆಗಳನ್ನು ಜಿಲ್ಲಾಧಿಕಾರಿಗಳ ಅಧೀನದಲ್ಲಿ ಕಾರ್ಯನಿರ್ವಹಿಸುತ್ತಿರುವ ಜಿಲ್ಲಾ ನಗರಾಭಿವೃದ್ಧಿ ಕೋಶಗಳ ಯೋಜನಾ ನಿರ್ದೇಶಕರುಗಳ ಮೂಲಕ ನಿಯಂತ್ರಿಸಿ ಕಾರ್ಯವಿಧಾನವನ್ನು ಪರಿಶೀಲಿಸಲಾಗುತ್ತದೆ.

ಆಡಳಿತಾತ್ಮಕ ವಿಚಾರಗಳಾದ ಬಿ ವೃಂದದ ನೌಕರರುಗಳ ನೇರ ನೇಮಕಾತಿ, ಮುಂಬಡ್ತಿ, ವಿಚಾರಣೆ, ಪರೀಕ್ಷಾರ್ಥ ಅವಧಿ ಘೋಷಣೆ, ಕಾಲಮಿತಿ ವೇತನ ಬಡ್ತಿ, ಕಡ್ಡಾಯ ನಿರೀಕ್ಷಣಾಅವಧಿ ಘೋಷಣೆಗಳನ್ನು ಹಾಗೂ ಸಿ ವೃಂದದ ನೌಕರರುಗಳ ನೇರ ನೇಮಕಾತಿ, ವಿಚಾರಣೆ, ಕಡ್ಡಾಯ ನಿರೀಕ್ಷಣಾ ಅವದಿ ಘೋಷಣೆ ಹಾಗೂ ಕಂದಾಯಾಧಿಕಾರಿ, ಕಛೇರಿ ವ್ಯವಸ್ಥಾಪಕರು, ಹಿರಿಯ ಆರೋಗ್ಯ ನಿರೀಕ್ಷಕರ ವೃಂದಕ್ಕೆ ಮುಂಬಡ್ತಿ ನೀಡಲಾಗುತ್ತದೆ.

• ಆಡಳಿತಾತ್ಮಕ ಹಿತದೃಷ್ಟಿಯಿಂದ ಕಾಲಕಾಲಕ್ಕೆ ಸುತ್ತೋಲೆಗಳನ್ನು ಹೊರಡಿಸುವುದು, ನಿಯಮಗಳ ರಚನೆ, ನಿಯಮಗಳ ತಿದ್ದುಪಡಿ, ಅಧಿಸೂಚನೆಗಳನ್ನು ಪ್ರಚುರು ಪಡಿಸುವ ಬಗ್ಗೆ ಪ್ರಸ್ತಾವನೆಗಳನ್ನು ಸಲ್ಲಿಸುವುದು, ಜನ ಸಂಖ್ಯೆಗೆ ಅನುಗುಣವಾಗಿ ನಗರ ಸ್ಥಳೀಯ ಸಂಸ್ಥೆಗಳಾಗಿ ಮೇಲ್ದರ್ಜೆಗೇರಿಸುವುದು ಹಾಗೂ ಇತರೆ ಆಡಳಿತಾತ್ಮಕ ಕರ್ತವ್ಯಗಳನ್ನು ನಿರ್ವಹಿಸಲಾಗುತ್ತದೆ.

 

ಮೂಲ : ಪೌರಾಡಳಿತ ನಿರ್ದೇಶನಾಲಯ , ಕರ್ನಾಟಕ ಸರ್ಕಾರ.